Monday, April 25, 2011

ಆನಂದಮಯವಾಗಿರಲಿ...

"ಉತ್ತಮವಾಗಿ ಬದುಕುವುದೂ ಒಂದು ಕಲೆ. ಇದನ್ನು ಅರಿತರೆ ಎಂದಿಗೂ ಸಂತೋಷವಾಗಿರಹುದು. ಪ್ರತಿಯ್ಬೊರು ಸಾಯಲೇ ಬೇಕು. ಸದ್ಯಕ್ಕಂತೂ ಜೀವಿಸುವ ಆನಂದ ಅನುಭವಿಸಿ ಬದುಕಿರುವ ತನಕ ಸಕಾರಾತ್ಮಕವಾಗಿ ಯೋಚಿಸಿ. ಜೀವನ ಸುಂದರವಾಗಿಟ್ಟುಕೊಳ್ಳಿ."

ಜೀವನದಲ್ಲಿ ಜಂಜಾಟಗಳು ಇದ್ದೇ ಇರುತ್ತದೆ. ಇದರಿಂದ ಹೆದರಿದ ಕೆಲವರು ತಮ್ಮನ್ನು ತಾವೇ ಹಳಿದುಕೊಂಡರೆ ಕೆಲವರು ಅದನ್ನು ಧೈರ್ಯದಿಂದ ಎದುರಿಸುತ್ತಾರೆ. ಬದುಕುವ ಈ ಪರಿಯ ಜೀವನದಲ್ಲಿ ಸಂತಸ ತರುತ್ತದೆ.
ಬದುಕ ಬೇಕೆಂದರೆ ಮನದುಂಬಿ ಬದುಕಿ. ಪ್ರತಿ ಕ್ಷದಣದಲ್ಲೂ ಪೂರ್ತಿಯಾಗಿ ಜೀವಿಸಿ ಯಾವ ಗಳಿಗೆಗೆ ಕೊನೆ ಇರುತ್ತದೋ ಯಾರಿಗೆ ಗೊತ್ತು? ಇರುವುದರಲ್ಲೇ ನೆಮ್ಮದಿಯಿಂದ ಜೀವಿಸಿ. ಇದು ಜೀವನವನ್ನು ಸರಿಯಾಗಿ ಅನುಭವಿಸುವ ಸರಿಯಾದ ರೀತಿ. ಪ್ರತಿ ಕ್ಷಣವೂ ಉತ್ಸಾಹ ಮತ್ತು ಸಂತೋಷದಿಂದ ಕೂಡಿರಬೇಕು. ನಾಳೆ ಏನಾಗುತ್ತದೆ ಎನ್ನುವುದು ಗೊತ್ತಿಲ್ಲ. ಹಾಗಿದ್ದರೆ ಈ ದಿನವನ್ನೇಕೆ ಮನಃಪೂರ್ತಿಯಾಗಿ ಜೀವಿಸಬಾರದು? ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲಾಲ ಒಂದು ರೀತಿಯಲ್ಲಿ ಸಮಸ್ಯೆಗಳು ಎದುರಾಗುತ್ತಾ ಇರುತ್ತದೆ. ಜೀವನದಲ್ಲಿರುವ ಸಮಸ್ಯೆಗಳನ್ನು ಕಂಡು ಧೈರ್ಯಗೆಡಹುದು. ಮನದಲ್ಲಿ ಧೈರ್ಯತುಂಬಿರಬೇಕು. ಕಾಲಸರಿದಂತೆ ದುಃಖದ ಕ್ಷಣಗಳನ್ನು ಮರೆತು ಮನಸ್ಸು ಸಂತೋಷದಿಂದಿರುವಂತೆ ನೋಡಬೇಕು.

1. ಸುಂದರ ಕ್ಷಣ ನಿಮ್ಮದಾಗಲಿ
ಜೀವನದಲ್ಲಿ ಜಂಜಾಟಗಳು ಇದ್ದದ್ದೇ. ಪ್ರಕೃತಿಯಲ್ಲಿ ಸಿಗುವ ತುಂತುರು ಮಳೆ ಹನಿ, ಸಮುದ್ರದ ತೀರದ ಕಪ್ಪೆ ಚಿಪ್ಪು, ಮಕ್ಕಳೊಂದಿಗೆ ಕೆಲ ಕ್ಷಣವನ್ನು ಕಳೆಯಿರಿ. ಈ ಜೀವನ ನಿಜವಾಗಿಯೂ ಸುಂದರವಾಗಿದೆ ಎಂ ಅನುಭವ ನಿಮ್ಮದಾಗುತ್ತದೆ.
2.ಸ್ನೀಹಿತರ ಒಡನಾಟ
ಮನುಷ್ಯ ಪ್ರಪಂಚಕ್ಕೆ ಒಂಟಿಯಾಗಿಯೇ ಇರುತ್ತಾನೆ. ಆದರೆ ಆತ ಜೀವಿಸಲು ಅನೇಕ ಸಂಬಂಧಿಕರು ಹಾಗೂ ಸ್ನೇಹಿತರು ಬೇಕಾಗುತ್ತದೆ. ನಿಮ್ಮ ಮನಸ್ಸಿನ ಮಾತು ಹಾಗೂ ನೋವನ್ನು ಹಂಚಿಕೊಳ್ಳುತ್ತಾರೆ. ನಿಮ್ಮ ಮನಸ್ಸಿಗೂ ಆನಂದ ನೀಡುತ್ತಾರೆ.
3. ನಗುತ್ತಿರಿ
ನಗಲು ನೆಪಗಳು ಸಾವಿರಾರು ದೊರಕುತ್ತದೆ. ನಿಮ್ಮ ಅಕ್ಕ ಪಕ್ಕದಲ್ಲಿ ಸಿಗುವ ಹಾಸ್ಯ ಸನ್ನಿವೇಶವನ್ನೂ ಆನಂದಿಸಿ. ಹಾಸ್ಯ, ತಮಾಷೆಯಲ್ಲಿ ಪಾಲ್ಗೋಗಳ್ಳಿ. ನಿಮ್ಮ ನಗು ಜನರನ್ನು ನಿಮ್ಮಹತ್ತಿರ ಆಕರ್ಷಿಸುತ್ತದೆ. ಆಗ ಜೀವನದ ಮಜಾನೆ ಬೇರೆಯಾಗುತ್ತದೆ.
4. ಪಾರ್ಟಿ ಕೊಡಿ ಹಾಗೂ ಹೋಗಿ
ಜೀವನವನ್ನು ಆನಂದಿಸಲು ಒಳ್ಳೆಯ ಮಾರ್ಗ ಚಿಕ್ಕ ಕಾರಣಕ್ಕೂ ಪಾರ್ಟಿಯನ್ನು ಮಾಡಿ ನಾಲ್ಕು ಸ್ನೇಹಿತರೊಂದಿಗೆ ಟ್ರೀಟ್‌ ಕೊಡುವುದು ಮತ್ತು ಪಡೆಯುವುದು. ಗೆಳೆಯರು, ಬಂಧುಗಳು, ಸಂಗಾತಿಗಳ ಜೊತೆ ಕಳೆದ ಕೆಲವು ನಿರಾತಂಕ ಕ್ಷಣಗಳ ನೆನಪು ಇಡೀ ಜೀವನದಲ್ಲಿ ಖುಷಿಯನ್ನು ನೀಡುತ್ತದೆ.
5. ವಿವಾದಗಳಿಂದ ದೂರವಿರಿ
ಕಾರಣವಿಲ್ಲದೆ ವಿವಾದಗಳನ್ನು ಹುಟ್ಟಾಕಬೇಡಿ. ಆದಷ್ಟು ಹೊಂದಿಕೊಂಡು ಹೋಗುವ ಗುಣವನ್ನು ರೂಢಿಸಿಕೊಳ್ಳಿ. ಶಾಂತಿಯಿಂದ ಖುಷಿಯಲ್ಲಿ ಕಾಲಕಳೆದಷ್ಟು ಒಳ್ಳೆಯದು. ಆದರೆ ಇದರರ್ಥ ಅನ್ಯಾಯ ಸಹಿಸಿಕೊಳ್ಳಬೇಕು ಎಂದಲ್ಲ. ವೈ ಮನಸ್ಸಿನಿಂದ ಬೇರೆಯವರಿಗೆ ಕೆಡುಕನ್ನು ಮಾಡಬೇಡಿ.
6. ಸುತ್ತಾಡಲು ಹೋಗಿ
ಸಿಕ್ಕ ಸಮಯದಲ್ಲಿ ಸ್ನೇಹಿತರೊಂದಿಗೆ ಹೊರಗಡೆ ತಿರುಗಲು ಹೋಗಿ. ನಿಮ್ಮ ವಿಹಾರಕ್ಕೆ ಹೋಗುವಾಗ ಕ್ಯಾಮೆರಾ, ತಿಂಡಿಗಳು ಜೊತೆಯಿರಲಿ. ಸ್ನೇಹಿತರೊಂದಿಗೆ ಒಂದಿಷ್ಟು ಆಟಗಳನ್ನಾಡಿ. ಆ ಸುಂದರ ಕ್ಷಣಗಳು ನಿಮ್ಮ ಸವಿನೆನಪಿಗೆ ಕಾರಣವಾಗುತ್ತದೆ.
7. ಮಾತು ಮಿತವಾಗಿರಲಿ
ನೀವು ಆಡುವ ಪ್ರತಿಯೊಂದು ಮಾತು ನಿಮ್ಮ ಗುಣ, ಭಾವನೆಗಳನ್ನು ತಿಳಿಸುತ್ತದೆ. ಇನ್ನೋಬ್ಬರೊಂದಿಗೆ ಮಾತನಾಡುವಾಗ ಆದಷ್ಟು ಸಮಾಧಾನ ಹಾಗೂ ಪ್ರೀತಿಯಿಂದ ಮಾತನಾಡಿ.

ಜನರು ದೈಹಿಕ ನ್ಯೂನ್ಯತೆ ಇದ್ದರೂ ಧೈರ್ಯದಿಂದ ಬದುಕುತ್ತಾರೆ. ಹಾಗಿದ್ದಮೇಲೆ ಏನೂ ನ್ಯೂನ್ಯತೆ ಇಲ್ಲದ ನಾವೇಕೆ ಜೀವನದಲ್ಲಿ ಏನೋ ಕಳೆದುಕೊಂಡಂತೆ ಚಿಂತಿಸಿ ಬದುಕ ಬೇಕು? ಉತ್ತಮವಾಗಿ ಬದುಕುವುದೂ ಒಂದು ಕಲೆ. ಇದನ್ನು ಅರಿತರೆ ಎಂದಿಗೂ ಸಂತೋಷವಾಗಿರಹುದು. ಪ್ರತಿಯ್ಬೊರು ಸಾಯಲೇ ಬೇಕು. ಸದ್ಯಕ್ಕಂತೂ ಜೀವಿಸುವ ಆನಂದ ಅನುಭವಿಸಿ ಬದುಕಿರುವ ತನಕ ಸಕಾರಾತ್ಮಕವಾಗಿ ಯೋಚಿಸಿ. ಜೀವನ ಸುಂದರವಾಗಿಟ್ಟುಕೊಳ್ಳಿ.

1 comment: