Monday, April 11, 2011

ಮರೆವಿಗೆಲ್ಲಿದೆ ಮದ್ದು...


'ನಾನು ಈಗ ಕೈಲಿ ಪುಸ್ತಕವನ್ನು ಹಿಡ್ಕೊಂಡು ಬಂದಿದ್ದೆ, ಫೋನ್‌ಕಾಲ್‌ ಬಂತೂ ಅಂತ ಅದನ್ನಾ ಇಲ್ಲೆ ಎಲ್ಲೋ ಇಟ್ಟು ಹೋದೆ, ಅದೆಲ್ಲಿಟ್ಟೇ ಅನ್ನೋದೆ ಈಗ ನೆನಪಾಗ್ತಾ ಇಲ್ಲ... ಛೇ.. ಎಲ್ಲಿಟ್ಟೆ ನಾನು...?'
ನಿಜ, ಇಂಥ ಅನೇಕ ಮಾತುಗಳನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಇದುವೇ ಮರೆವು. ಮರೆವು ಎನ್ನುವುದು ಕೇವಲ ಒಬ್ಬಿಬ್ಬರ ಸಮಸ್ಯೆಯಲ್ಲ. ಮನುಷ್ಯಕುಲಕ್ಕೆ ಅಂಟಿ ಕೊಂಡ ಕಾಯಿಲೆ. ಮರೆವು ಎಂಬುದು ಮಾನವನಿಗೆ ವರವೂ ಹೌದು, ಶಾಪವೂ ಹೌದು. ಇದೆಷ್ಟು ಪ್ರಭಾವಿ ಎಂದರೆ ಅದನ್ನು ಗೆದ್ದವರು ಬಹುಷಃ ಯಾರು ಇಲ್ಲವೇನೋ!
ಇದೇನು ಮಹಾನ್‌ ವಿಷಯವಲ್ಲ ಎಂದು ತಿಳಿಯಬೇಡಿ. ಮರೆವಿನಲ್ಲೂ ಅನೇಕ ವಿಧಗಳಿವೆ. ಕೆಲವು ವಯಸ್ಸಿಗನುಗುಣವಾಗಿ ಬಂದರೆ ಇನ್ನು ಕೆಲವು ದೇಹದಲ್ಲಿರುವ ರಕ್ತ ಪರಿಚಲನೆಗಳಿಂದಲೂ ಬರುತ್ತದೆ. ಇದೊಮ್ಮೆ ವ್ಯಕ್ತಿಯನ್ನು ಆಕ್ರಮಿಸಿತು ಎಂದರೆ ಆತ ಸತ್ತಂತೆ ಬಾಳುವ ಪರಿಸ್ಥಿತಿಯನ್ನೂ ತಂದು ಬಿಡುತ್ತದೆ. ವ್ಯಕ್ತಿ ಚಿಕ್ಕವನಿರುವಾಗ ಆತನಲ್ಲಿ ನೆನಪಿನ ಶಕ್ತಿ ಅಗಾಧವಾಗಿರುತ್ತದೆ. ಹಾಗಾಗಿಯೇ ಚಿಕ್ಕವಯಸ್ಸಿನಲ್ಲಿರುವಾಗ ಮಕ್ಕಳು ಹೆಚ್ಚು ಭಾಷೆಯನ್ನು ಕಲಿಯಲು, ಹೆಚ್ಚೆಚ್ಚು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಹಾಗೇ ವಯಸ್ಸಾದಂತೆ ನೆನಪಿನ ಗೂಡಿನಲ್ಲಿರುವ ಅಲ್ಪ ಸಲ್ಪ ನೆನಪುಗಳು ಹಾರಿ ಹೋಗಿರುತ್ತದೆ. ಆದ್ದರಿಂದಲೇ ಅದನ್ನು ಅರಳು ಮರಳು ಎಂದುಕರೆಯುತ್ತಾರೆ. ಮರೆವು ಎಷ್ಟು ಅವಶ್ಯಕ ಎನಿಸುತ್ತದೆಯೋ ಅಷ್ಟೇ ಅಪಾಯ ಕಾರಿಯೂ ಹೌದು. ಮೆದುಳಿನಲ್ಲಿ ವಿಷಯಗಳ ಸಂಗ್ರಹಣೆಯು ಕೆಲವು ಹಂತಗಳಲ್ಲಿ ಮಾರ್ಪಡುವುದರಿಂದ ಮರೆವಿನಲ್ಲಿ ಜ್ಞಾನೇಂದ್ರಿಯ ಮರೆವು, ದೀರ್ಘಾವಧಿಯ ಮರೆವು, ಅಲ್ಪಾವಧಿಯ ಮರೆವು ಉಂಟಾಗುತ್ತದೆ. ಮೆದುಳಿನಲ್ಲಿ ಬಿಲೆಸೆಲ್‌‌ಸ ಪ್ರಮಾಣಗಳವ್ಯತ್ಯಾಸ ಹಾಗೂ ಸೆಲ್ಸ್ ನ ಉತ್ಪತ್ತಿ ಕಡಿಮೆಯಾಗುವುದರಿಂದ ಮರೆವು ಉಂಟಾಗುತ್ತದೆ. ನಾವಿರುವ ಸನ್ನಿವೇಶದಲ್ಲಿ ವಿಷಯಗಳ ಕುರಿತು ಗಮನ ಹರಿಸದೆ ಬೇರೊಂದು ವಿಚಾರದಲ್ಲಿ ಮಗ್ನರಾಗಿದ್ದರೂ ವಿಸ್ಮರಣೆ ಉಂಟಾಗುತ್ತದೆ. ಇದುಮುಖ್ಯವಾಗಿ ವ್ಯಕ್ತಿಯ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ. ಎನ್ನುತ್ತಾರೆ ಉತ್ತರ ಕನ್ನಡ ಜಿಲ್ಲೆಯ ಎ.ವಿ.ಬಾಳಿಗಾ ಕಾಲೇಜಿನ ಮನೋವಿಜ್ಞಾನದ ಉಪನ್ಯಾಸಕ ವೆಂಕಟಾಚಲ.
ಮೆದುಳಿನಲ್ಲಾಗುವ ಬದಲಾವಣೆ ಪ್ರತಿಯೊಬ್ಬರೂ ಹುಟ್ಟಿದ ಅವಧಿಯಿಂದ 20 ವರ್ಷ
ಕಳೆದಂತೆ ಮೆದುಳಿನಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತದೆ. ಇಂಥ ಸಮಯದಲ್ಲಿ ಕೆಲವು ಮೆದುಳಿನ ಕೋಶಗಳು ತಮ್ಮ ಶಕ್ತಿಯನ್ನು ಅಲ್ಪ ಪ್ರಮಾಣದಲ್ಲಿ ಕಳೆದುಕೊಳ್ಳುತ್ತ ಬರುವುದರಿಂದ ಮರೆವು ಉಂಟಾಗುತ್ತದೆ. ಕೆಲವೊಮ್ಮೆ ನಾವು ನೋಡುವ ಹಾಗೂ ಕೇಳುವ ವಿಷಯಗಳಲ್ಲಿ ಗಮನ ನೀಡದಿದ್ದರೂ ಸಹ ಮರೆವು ಉಂಟಾಗುತ್ತದೆ.

ವಿಸ್ಮರಣೆಗೆ ಕಾರಣ:
1. ಸಂಗತಿಗಳ ಬಗ್ಗೆ ಲಕ್ಷ್ಯ ವಹಿಸದಿರುವುದು.
2. ಅಮ್ನೇಷಿಯಾ ಉಂಟಾಗುವುದರಿಂದ.
3. ಕೆಲವೂಮ್ಮೆ ಆತ್ಮೀಯರನ್ನು ಕಳೆದು ಕೊಂಡು ಉಂಟಾಗುವ ಮಾನಸಿಕ ಆಘಾತ.
4. ವಯಸ್ಸಾದಂತೆ ಮೆದುಳಿನಲ್ಲಿ ವಿಷಯಗಳನ್ನು ಸಂಗ್ರಹಿಸಿಕೊಳ್ಳುವಾಗ ಬರುವ ಮಾನಸಿಕ ಘರ್ಷಣೆ.
5. ವ್ಯಕ್ತಿಯ ಮಾನಸಿಕ ಸ್ಥಿತಿಯ ಸಾಮರ್ಥ್ಯ.
6. ರಕ್ತದೊತ್ತಡ ಹೆಚ್ಚಾಗಿರುವುದು.
7. ಅತಿಯಾದ ಮಾತ್ರೆಗಳ ಸೇವಿಸುವುದು.
8. ಮೆದುಳಿನ ನರಗಳ ದೌರ್ಭಲ್ಯ.
9. ರಕ್ತ ಸಂಚಲನೆ ನಿಧಾನವಾಗುವುದು.
10. ಮೆದುಳಿಗೆ ಪರಿಣಾಮ ಕಾರಿ ಅಪಘಾತ
ಉಂಟಾಗುವುದರಿಂದ.

ವಿಸ್ಮರಣೆಗೆ ಚಿಕಿತ್ಸೆ:
1. ಗಿಡಮೂಲಿಕೆ ಔಷಧಗಳನ್ನು ಬಳಸುವುದು.
2. ಧ್ಯಾನ ಮಾಡುವುದು.
3. ಪೌಷ್ಠಿಕ ಆಹಾರಗಳನ್ನು ಸೇವಿಸುವುದರಿಂದ.
4. ಹಸಿರು ತರಕಾರಿ, ಒಂದೆಲಗ, ತುಳಸಿ ಎಲೆ, ಮೀನು
ಹಾಗೂ ಗರಿಕೆ ಹುಲ್ಲಿನ ರಸದ ಕಶಾಯ ಸೇವಿಸಬೇಕು.
5. ಧ್ಯಾನ, ಯೋಗ, ಹಾಗೂ ಪ್ರಾಣಯಾಮ
ಮಾಡುವುದರಿಂದ ನೆನಪಿನ ಶಕ್ತಿಯನ್ನು ಹೆಚ್ಚಿಸಕೊಳ್ಳಬಹುದು.
6. ಮೆದುಳಿಗೆ ಕೆಲಸ ಕೊಡುವುದು, ಸುಡೋಕು,
ಪದಬಂಧ, ಚಿಕ್ಕಪುಟ್ಟ ಲೆಕ್ಕಗಳನ್ನೆಲ್ಲ ಮಾಡುವುದರಿಂದ ಮೆದುಳಿಗೆ ವ್ಯಾಯಾಮ ಕೊಟ್ಟಂತಾಗುತ್ತದೆ. ಮರೆವು ಉಂಟಾಗುತ್ತದೆ.

ಹೇಗೆ ನೆನಪಿಟ್ಟುಕೊಳ್ಳುವುದು?
1. ಬೇಕಾದ ವಿಷಯಗಳನ್ನು ಚೀಟಿಯಲ್ಲಿ ಬರೆದಿಟ್ಟು ಕೊಳ್ಳಿ.
2. ಕೇಳಿದ ಹೊಸ ವಿಚಾರಗಳನ್ನು ನಿಮ್ಮ ಹಳೆ ವಿಚಾರಗಳಿಗೆ ಅಥವಾ ಗೊತ್ತಿದ್ದ
ಪದಗಳಿಗೆ ಹೋಲಿಸಿ ಮನದಟ್ಟು ಮಾಡಿಕೊಳ್ಳಿ.
3. ನಿಮ್ಮ ಮುಖ್ಯ ಕೆಲಸಗಳ ಮಾಹಿತಿಗಳನ್ನು ನಿಮ್ಮ ದಿನಚರಿ ಪಟ್ಟಿಯಲ್ಲಿ
ಬರೆದಿಟ್ಟುಕೊಳ್ಳಿ.
4. ಹೊಸ ಹೊಸ ವಿಚಾರಗಳನ್ನು ಕೇಳಿದಂತೆ ಪುನಃ ಪುನಃ ಮನದಲ್ಲಿ
ನೆನಪಿಸಿಕೊಳ್ಳಿ.
5. ನಿಮ್ಮ ಕೆಲವು ದಾಖಲಾತಿ ಪುರವಣಿಗೆ ಅಥವಾ ಇನ್ಯಾವುದೋ ವಸ್ತುಗಳನ್ನು
ಇಡಲು ಅದರದೇ ಆದ ಜಾಗವನ್ನು ಮಾಡಿ ಪ್ರತಿ ಬಾರಿ ಅಲ್ಲೇ ಇಡಿ.
6. ಆಗಾಗ ಮನಸ್ಸನ್ನು ವಿಶ್ರಾಂತ ಗೊಳಿಸಲು ದಿನದಲ್ಲಿ ಒಂದು ಗಂಟೆ ಧ್ಯಾನ
ಮಾಡಿ.
7. ನಿಮ್ಮನ್ನು ನೀವು ದೈಹಿಕವಾಗಿ ಹಾಗೂ ಮಾನಸಿಕವಾಗಿ
ಕ್ರಿಯಾಶೀಲರನ್ನಾಗಿಸಿಕೊಳ್ಳಿ.
8. ಯಾವುದೇ ವಿಚಾರವನ್ನು ಕೇಳುವಾಗ ಗಮನವಿಟ್ಟು ಆಲಿಸಿ.
9. ಯಾವೊಂದು ವಿಚಾರದ ಬಗ್ಗೆಯೇ ಅತಿಯಾಗಿ ಯೋಚಿಸಬೇಡಿ.
10. ನಿಮ್ಮ ಮನಸ್ಸನ್ನು ಆದಷ್ಟು ತಿಳಿಯಾಗಿಡಲು ಪ್ರಯತ್ನಿಸಿ.

ದೈಹಿಕ ಆರೋಗ್ಯ ಹಾಳಾದರೆ ಯಾವುದಾದರೂ ಚಿಕಿತ್ಸೆ, ಔಷಧಿಗಳನ್ನು ಸೇವಿಸಿ
ಆರೋಗ್ಯವಂತರಾಗಬಹುದು. ಆದರೆ ಅದೇ ಮಾನಸಿಕ ಆರೋಗ್ಯ ಹಾಳಾದರೆ ಗುಣ
ಪಡಿಸುವುದು ಕಷ್ಟ ಸಾಧ್ಯ. ಅದರಲ್ಲೂ ಮದ್ದೇ ಇಲ್ಲದ ಮರೆವಿನಂತ ಕಾಯಿಲೆಗಳು
ಬಂದರೆ ಬಹಳ ಕಷ್ಟ.. ವ್ಯಕ್ತಿಯ ವ್ಯಕ್ತಿತ್ವ ಉತ್ತವಾಗಿದ್ದರೆ ಆತ ಕೆಲವೊಂದು
ಆಯಾಮಗಳಿಂದ ಮರೆವಿಗೆ ಕೊಂಚ ಪರಿಹಾರ ಕಂಡು ಕೊಳ್ಳಬಹುದು ಎನ್ನುತ್ತಾರೆ ವೆಂಕಟಾಚಲ
ಹೌದು... ಇಷ್ಟೊಂದು ವಿಷಯ ಓದಿದ ಮೇಲೆ ಮರೆವಿನ ಬಗ್ಗೆ ಮರ್ಯೋದಿಲ್ಲ ತಾನೇ..?

2 comments:

  1. ದಿವ್ಯ ದೇವಿ ಸಂತೋಷ,
    ಭಾವ ಭವ್ಯ ವಿಶೇಷ,
    ಮನೋವೇಧಕ ವಿಷಯ ಸ್ಪರ್ಶ
    ಕಳವಳ ತಳಮಳ ತುಂಬಿದ ನಿರಾಷ
    ಚರಿತೆಯ ಚಿತ್ತಾರ ರೂಪಪ್ರೇಕ್ಷ
    ನೀತಿ ಧರ್ಮ ವಿಧ್ಯಾಭ್ಯಾಸ
    ಆಚರಿಸಿದ ಬಾಳಿನ ಅಭ್ಯಾಸ,
    ನೆಮ್ಮದಿಯ ಸೌಕ್ಯ ಜೀವನ ಆಶಿಸಿ,
    ಆಕಾಂಕ್ಷೆಯಲಿ ಆಗರದಿ ನೀರೀಕ್ಷಿಸಿ,
    ಎದುರುನೋಡಿದ್ದು ಸಾಮಾನ್ಯ ಮಾನವತೆ,
    ಪಡೆದದ್ದು ಬಾಳಿದ್ದು ನಿರಾಶೆಯ ಕತೆ!
    *
    ಅಂತಃ ಸಂಕಟದಾಕ್ರಮಣದ ಮನ ಕಲ್ಲೋಲ
    ನನಚುಚ್ಚುವ ವೇದನೆಯನುಭವಕಾಲ,
    ಹೃದಯ ಬಿಚ್ಚಿ ಚಿಂತೆಯ ಹೊರಹಾಕಿ
    ಹೇಳಿಕೊಳ್ಳುವಾಗ ಅತ್ತು ಅಳುತ ಬಿಕ್ಕಿಬಿಕ್ಕಿ,
    ಆತ್ಮೀಯವಾಗಿ ಕೇಳುತ ಅಪ್ಪಿಕೊಳ್ಳುವ ವ್ಯಕ್ತಿ,
    ಒಬ್ಬಳೇಒಬ್ಬಳು - ಅಮ್ಮ - ಅವಳೇ ಮಹೇಶ್ವರಿ,
    ’ಅಮ್ಮ’ನಂತ ಸರಿಸಮಾನರಿಲ್ಲ ಅವಳೇ ವಿಶ್ವೇಶ್ವರಿ,
    ಸಮಾದಾನ ತರುವ ಅಮಿತ ಪ್ರೀತಿಯ ಮನೋಹರಿ,
    ’ಅಮ್ಮ’ನಿಗಿಂತ ಮೇಲಾದದ್ದಿಲ್ಲ ಐಶ್ವರ್ಯಸಿರಿ!
    *
    ಸಂತೋಷ ದೇವಿ ದಿವ್ಯ ಮಾನವಿ, ಬೆಳಗಲಿ ರವಿ,
    ನುಡಿಸುಂದರಿ, ಭಾವಮನೋಹರಿ, ಇದು ಗೌರವಪದವಿ.
    *
    ನಿಮ್ಮ ಕಿರಿಯ ಜೀವನಚರಿತೆ ಮನಗ್ರಾಹಕ,
    ದುಃಖ ದುಗುಡಗಳ ಸರೋವರ ಶೋಕಲೋಕ.
    ಕಿರಿದಾಗಿ ಅಚ್ಚುಕಟ್ಟಾಗಿ ಸಾಹಿತಿಯಯಾಗಿ ವಿವರಿಸಿ,
    ಸವಿಗನ್ನಡದಲಿ ಸೊಗಸಾಗಿ ಗ್ರಾಹಕವಾಗಿ ಬಣ್ಣಿಸಿ.
    ಕಂಗ್ಲಿಷ್ ಯುಗದಲಿ, ಶುದ್ಧ ಕನ್ನಡಲಿ ರಚಿಸಿ,
    ’ಅಮ್ಮ’ನನು ಪೂಜಿಸಿ, ಪ್ರೀತಿಸಿ, ಅಪಾರ ನೆನಸಿ.
    *
    ಎನಗದು ಮನ ಮೆಚ್ಚಿತು, ಹೃದಯ ಗ್ರಹಿಸಿತು,
    ಮಾತುಮಾತುಗೂ ಚಿನ್ನದ ಮಾತು, ಹೊನ್ನಾದ ಮಾತು.
    ಆಶಿಸುವೆ: ಗಳಿಸಲಿ ನಿಮಗೆ ಪ್ರಭುದ್ಧ ಪ್ರಗತಿ,
    ’ಅಮ್ಮ’ನ ಆಶೀರ್ವಾದದಲಿ, ಮುದ್ದುಮಗಳ ಜೊತಿ,
    ಕಠಿಣ ಕಪಟ ಕಠೋರ ಲೋಕದಿ ಜಯಿಸೆ ಜೀವನ,
    ಙ್ಞಾನಶಕ್ತಿ ಭಾಗ್ಯಶಕ್ತಿ ಕೂಡಿ ದೇವದಯೆಯ ಭುವನ!
    *
    - ವಿಜಯಶೀಲ, ಬೆರ್ಲಿನ್, ೨೪.೦೫.೨೦೧೧
    mavipra@gmx.de

    ReplyDelete
  2. ನಿನ್ನ ಮರೆವಿನ article ಗೆ ಎಂಥೋ comment ಹಾಕವು ಅಂತ ಅಂದ್ಕಂಡಿದ್ದಿದ್ದಿ... but ಮರ್ತೋತು..!!!

    ReplyDelete